ದುನಿಯಾ ವಿಜಯ್ ಅಭಿಮಾನಿಗಳ ನಟ. ಅಭಿಮಾನಿಗಳ ಕಷ್ಟಗಳಿಗೆ, ಅಭಿಮಾನಕ್ಕೆ ಸ್ಪಂದಿಸುವ ಕಲಾವಿದ. ಅಭಿಮಾನಿಯೊಬ್ಬ ಸಾವಿಗೀಡಾದಾಗ ಖುದ್ದು ತಾವೇ ಹೆಗಲು ಕೊಟ್ಟಿದ್ದರು. ದಂಡ ಕಟ್ಟಲಾಗದೇ ಜೈಲಿನಲ್ಲಿದ್ದ ಕೆಲವು ಕೈದಿಗಳನ್ನು ಬಿಡುಗಡೆಗೊಳಿಸಲು ಸಹಾಯ ಮಾಡಿದ್ದರು. ಹೀಗೆ, ಜನರ ಪರವಾಗಿ ಅನೇಕ ಕೆಲಸಗಳಲ್ಲಿ ತೊಡಗಿಕೊಂಡಿರುವ ದುನಿಯಾ ವಿಜಯ್ ಅಂದ್ರೆ ಅವರ ಅಭಿಮಾನಿಗಳಿಗೂ ಪ್ರಾಣ. ದುನಿಯಾ ವಿಜಯ್ ನಟಿಸಿ, ಚೊಚ್ಚಲ ಬಾರಿಗೆ ನಿರ್ದೇಶನ ಮಾಡಿರುವ ಸಲಗ ಸಿನಿಮಾ ಯಶಸ್ವಿಯಾಗಲಿ ಎಂದು ಹಾರೈಸಿ ಅಭಿಮಾನಿಯೊಬ್ಬ ತನ್ನ ಕೈ ಮೇಲೆ 'ಸಲಗ' ಎಂದು ಟ್ಯಾಟೂ ಹಾಕಿಸಿಕೊಂಡಿದ್ದಾನೆ.
Kannada actor-Director Duniya vijay video call to his fan who inked his salaga movie title in his hand.